ಮಾಕ ಕೊಜ್ಹಾರಳನನ್ನು ಭೇಟಿಮಾಡಿ: ದ್ರಾಕ್ಷಾರಸ ತಜ್ಞೆ, ಯುವತಿ, ಬುದ್ಧಿವಂತೆ, ಸ್ನೇಹಮಯಿ.
ರಿಪಬ್ಲಿಕ್ ಆಫ್ ಜಾರ್ಜಿಯಾದ ಹಸಿರು ಮಣ್ಣಿನ ಬಣ್ಣದ ಕಣಿವೆಯಲ್ಲಿ ಬೃಹತ್ತಾದ ನೆಲಮಾಳಿಗೆಯಲ್ಲಿ ಕುಳಿತ್ತಿದ್ದಳು, ಈ ಬೃಹತ್ ನೆಲಮಾಳಿಗೆ ನಕಲಿ ಫ್ರೆಂಚ್ ಹಳ್ಳಿಮನೆಯ (ಚೆಟುವ) ಕೆಳಗಿದ್ದಿತು. ಹೊರಗಿನ ದ್ರಾಕ್ಷಿ ತೋಟಗಳು, ಗಂಟುಗಂಟಾದ ಸಾಲುಗಳಲ್ಲಿ ಮೈಲುಗಳುದ್ದಕ್ಕೆ ನೆಟ್ಟಿದ್ದವು. ಒಮ್ಮೆ 19ನೆ ಶತಮಾನದ ಉತ್ತರ ಭಾಗದಲ್ಲಿ ಚೆಟುವಾನ ಯಜಮಾನ, ಫ್ರೆಂಚ್ ಅಭಿಮಾನಿ, ದ್ರಾಕ್ಷಾರಸ ವ್ಯಾಪಾರಿ ಮತ್ತು ತಿಕ್ಕಲು ಮನಸ್ಸಿನ ಜಾರ್ಜಿಯಾದ ಕುಲೀನ ಶ್ರೀಮಂತ, ಪೀಪಾಯಿ ಗಟ್ಟಲೆ ಶಾಂಪೇನನ್ನು ಮನೆಯ ಮುಂದಿನ ಚಿಲುಮೆಯಲ್ಲಿ ಹಾರಲು ಬಿಟ್ಟಿದ್ದ: ಬಂಗಾರದ ಬಣ್ಣದ ಕುಡಿಯಲು ಯೋಗ್ಯವಾದ ಗುಳ್ಳೆಗಳು ಗಾಳಿಗೆ ತೂರುತ್ತಿದ್ದವು.
"ಸಂತೋಷ ಕೂಟಕ್ಕೆಂದು" ಕೊಜ್ಹಾರ ಹೇಳುತ್ತಾಳೆ. "ಆತ ದ್ರಾಕ್ಷಾರಸವನ್ನು ಪ್ರೀತಿಸುತ್ತಿದ್ದ."
ಕೊಜ್ಹಾರ ತನ್ನ ಕೈಯಲ್ಲಿದ್ದ ದ್ರಾಕ್ಷಾರಸದ ಗಾಜಿನ ಬಟ್ಟಲನ್ನು ವೃತ್ತಾಕಾರವಾಗಿ ತಿರುಗಿಸುತ್ತಿದ್ದಳು. ಗಾಜಿನ ಬಟ್ಟಲನ್ನು ಮೇಲ್ಛಾವಣಿಯ ದೀಪದೆಡೆ ಎತ್ತಿ ಹಿಡಿದಿದ್ದಳು. ಭೌತ ವಿಜ್ಞಾನಿಗಳು ಹೇಳುವ ಗಿಬ್ಸ್-ಮರನೋನಿ ಕ್ರಿಯೆಯನ್ನು ಗಮನಿಸುತ್ತಿದ್ದಳು: ದ್ರವದಲ್ಲಿರುವ ರಾಸಾಯನಿಕಗಳು ಹೇಗೆ ದ್ರವದ ಮೇಲ್ಮೈಕಾರ್ಷಣವನ್ನು ಬದಲಾಯಿಸುತ್ತವೆ. ಅದೊಂದು ನಿರ್ಣಾಯಕ ಸಾಧನ. ಗಾಜಿನ ಬಟ್ಟಲಿನ ಒಳಮೈಗೆ ದ್ರಾಕ್ಷಾರಸದ ಹನಿಗಳು ಅಂಟಿಕೊಂಡಿದ್ದರೆ: ಆ ದ್ರಾಕ್ಷಾರಸ ಶುಷ್ಕವೆಂದು, ಹೆಚ್ಚು ಮಧ್ಯಸಾರದ ಸಾಂದ್ರತೆಯುಳ್ಳದ್ದು. ದ್ರಾಕ್ಷಾರಸದ ಹನಿಗಳು ಒಳಮೈಗೆ ಅಂಟಿಕೊಳ್ಳದೆ ಜಾರಿಕೊಳ್ಳುತ್ತಿದ್ದರೆ ಅದು ಹೆಚ್ಚು ಸಿಹಿಯಾಗಿದೆ ಮತ್ತು ಕಡಿಮೆ ಮಧ್ಯಸಾರವಿದೆಯೆಂದು ತೀರ್ಮಾನಿಸಲಾಗುತ್ತದೆ. ಅಂಥ ಪೇಲವ ಹನಿಗಳ ಧಾರೆಯನ್ನು "ಕಾಲುಗಳು" ಎಂದು ದ್ರಾಕ್ಷಾರಸ ರುಚಿನೋಡುವ ತಙ್ಞರು ವಿವರಣೆ ನೀಡುತ್ತಾರೆ. ಆದರೆ ಈ ಜಾರ್ಜಿಯಾದಲ್ಲಿ ದ್ರಾಕ್ಷಾರಸ ಬೇರೆಯೇ ವಿಧದ ಕಾಲುಗಳನ್ನು ಹೊಂದಿದೆ. ಪ್ರಯಾಣಿಸುವ ಕಾಲುಗಳು. ಜಯಿಸುವಂತವು, ಕಂಚಿನ ಯುಗದಲ್ಲಿ ಕಾಕಸಸ್ ನ್ನು ದಾಟಿದ ನಡಿಗೆ.
Paul Salopek
ಜಾರ್ಜಿಯಾ ದ್ರಾಕ್ಷಾರಸದ ಬೇರುಗಳು ಬಹಳ ಹಳೆಯವು ಮತ್ತು ಹೆಚ್ಚು ಸ್ನಾಯು ಬಲವುಳ್ಳದ್ದು. ಕಾಲದ ತಳಪಾಯದೆಡೆಗೆ ಅವುಗಳು ಕೊರೆದಿವೆ, ಮನುಷ್ಯನ ಸ್ಮೃತಿಯ ಕೋಶದೊಳಗಿನ ತನಕ. ಪ್ರಪಂಚದಲ್ಲಿ ಮೊದಲು ವಸತಿ ಹೂಡಿದ ಸಮಾಜಗಳಾದ ಈ ಫಲವತ್ತಾದ ನಾಗರೀಕತೆ ತೊಟ್ಟಿಲಿನ ಚಕ್ರಾಧಿಪತ್ಯಗಳಾದ ಮೆಸಪೊಟೇಮಿಯ, ಈಜಿಪ್ಟ್ ಮತ್ತು ನಂತರ ಗ್ರೀಸ್ ಹಾಗೂ ರೋಮ್ - ಬಹುಶಃ ಈ ಅಭುಕ್ತಿ ಮೂಲೆಯಲ್ಲಿರುವ ಕಣಿವೆಗಳಿಂದ, ಬಯಲಿನಿಂದ ಯುರೇಷೀಯಾದ ಮಂಜು ಮುಸುಕಿದ ಸ್ಥಳಗಳಿಂದ, ದ್ರಾಕ್ಷಾರಸದ ಜ್ಞಾನವನ್ನು ಆಮದುಮಾಡಿಕೊಂಡಿವೆ. ಪುರಾತನ ಜಾರ್ಜಿಯನ್ನರು ಕ್ವೆರಿ ಎಂದು ಕರೆಯಲ್ಪಡುವ ಜೇಡಿ ಮಣ್ಣಿನ ಹೂಜಿಗಳಲ್ಲಿ ತಮ್ಮ ಪ್ರಸಿದ್ಧ ದ್ರಾಕ್ಷಾರಸವನ್ನು ಭಟ್ಟಿ ಇಳಿಸಿದ್ದಾರೆ, ಬುಲ್ಬೋಸ್ ಆಂಫೋರಾಸ್ ಎಂದು ಕರೆಯಲ್ಪಡುವ ಹೂಜಿಯನ್ನು ಇಂದಿಗೂ ತಯಾರಿಸುತ್ತಾರೆ. ಇಂದಿಗೂ, ವರ್ತಕರೂ ದ್ರಾಕ್ಷಾರಸವನ್ನು ಇದರಲ್ಲಿ ತುಂಬಿಸುತ್ತಾರೆ. ಜಾರ್ಜಿಯಾದ ಈ ಹೂಜಿಗಳು ಬೃಹದಾಕಾರದ ಡೈನೊಸಾರ್ ನ ಮೊಟ್ಟೆಗಳಂತೆ. ಇವುಗಳು ರೈತನ ಮನೆಯ ಕೆಳಗಡೆ, ಫಲಹಾರ ಗೃಹಗಳಲ್ಲಿ, ಉದ್ಯಾನವನಗಳಲ್ಲಿ, ವಸ್ತುಸಂಗ್ರಹಾಲಯಗಳಲ್ಲಿ, ತೈಲದಂಗಡಿಗಳ ಹೊರಗೆ ಇವೆ. ಕ್ವೆರಿ ಜಾರ್ಜಿಯಾದ ಗುರುತು: ಹೆಮ್ಮೆಯ ಆಕರ, ಒಗ್ಗಟ್ಟು, ಶಕ್ತಿ. ರಾಷ್ಟ್ರದ್ವಜದ ಮೇಲೆ ಕಾಣಿಸಿಕೊಳ್ಳಲು ಅರ್ಹವಾಗಿವೆ. ಜಾರ್ಜಿಯನ್ನರು ಸಾಮೂಹಿಕವಾಗಿ ಇಸ್ಲಾಮಿಗೆ ಮತಾಂತರ ಹೊಂದಲು ಒಪ್ಪದಿರುವುದಕ್ಕೆ (ಏಳನೆ ಶತಮಾನದಲ್ಲಿ ಅರಬ್ಬರು ಈ ಪ್ರದೇಶವನ್ನು ವಶಪಡಿಸಿಕೊಂಡಾಗ ) ವೈನ್ ಜೊತೆಗಿರುವ ಇವರ ಅವಿನಾಭಾವ ಸಂಬಂಧ, ಜಾರ್ಜಿಯನ್ನರು ಕುಡಿಯುವುದನ್ನು ತೊರೆಯಲು ನಿರಾಕರಿಸುತ್ತಾರೆ.
ಕೊಜ್ಹಾರ ಪಾನೀಯವನ್ನು ನನ್ನ ಬಟ್ಟಲಿಗೆ ಸುರಿಯುತ್ತಾಳೆ, ಇದು ಆಕೆಯ ವೈನರಿಯ ಹಳೆಯ ಅತ್ಯುತ್ತಮ, ಶಾಯಿಯ ಬಣ್ಣದಷ್ಟು ದಟ್ಟವಾಗಿದ್ದ, ಸಾಂದ್ರತೆಯುಳ್ಳದ್ದು. ದ್ರವ ನನ್ನ ಬಟ್ಟಲಲ್ಲಿ ಮಿನುಗುತ್ತದೆ, ಅದು ಮಣ್ಣಿನ ಹದವಾದ ಕಂಪನ್ನು ಪಸರಿಸುತ್ತದೆ, ಈ ಪರಿಮಳ ಬಹಳ ಪರಿಚಯವಿದ್ದಂತೆ, ನಾಗರೀಕತೆಯ ಆದಿಯಷ್ಟು ಹಳೆಯದು, ತಟ್ಟನೆ ಮಸ್ತಿಷ್ಕಕ್ಕೆ ತಿಳಿಯುತ್ತದೆ.
"ದ್ರಾಕ್ಷಾರಸ" - ಕೊಜ್ಹಾರ ಘೋಷಿಸುತ್ತಾಳೆ - "ನಮ್ಮ ಧರ್ಮ."
ಅದಕ್ಕೆ ಒಂದೆ ಪ್ರತಿಕ್ರಿಯೆ ಎಂದರೆ: ಆಮೆನ್ ಎಂದು.
"ಜಾರ್ಜಿಯಾದಲ್ಲೇ ದ್ರಾಕ್ಷಾರಸ ತಯಾರಿಕೆಯ ಜನ್ಮವಾದದ್ದು," ಎಂದು ಸಾಬೀತು ಪಡಿಸಲು ನಮಗೇನೂ ಆಸಕ್ತಿ ಇಲ್ಲ ಎಂದು ತಿಬಿಲಿಸಿಯ, ಜಾರ್ಜಿಯಾ ನ್ಯಾಷನಲ್ ಮ್ಯೂಸಿಯಂನ ನಿರ್ದೇಶಕರಾದ ಡೇವಿಡ್ ಲಾರ್ಡ್ಕಿಪನಿಡ್ಜೆ ಹೇಳುತ್ತಾರೆ. "ಅದು ನಮ್ಮ ಗುರಿಯಲ್ಲ. ಅದಕ್ಕಿಂತಲೂ ಉತ್ತಮವಾದ ಪ್ರಶ್ನೆಗಳು ಕೇಳಲಿಕ್ಕಿವೆ. ಯಾಕೆ ಆರಂಭವಾಯಿತು? ಹೇಗೆ ಪುರಾತನ ಕಾಲದಲ್ಲಿ ಎಲ್ಲ ಕಡೆ ಹರಡಿತು? ಇಂದಿನ ದ್ರಾಕ್ಷಿಹಣ್ಣುಗಳನ್ನು ಹೇಗೆ ಹಿಂದಿನ ಕಾಡು ದ್ರಾಕ್ಷಿಹಣ್ಣಿಗೆ, ಸಂಬಂಧ ಕಲ್ಪಿಸುತ್ತೀರ? ಇವುಗಳು ಬಹು ಮುಖ್ಯವಾದ ಪ್ರಶ್ನೆಗಳು."
ಲಾರ್ಡ್ಕಿಪನಿಡ್ಜೆ ಯವರು ಬಹಳ ವಿಶಾಲವಾದ, ಬಹುರಾಷ್ಟ್ರೀಯ, ವೈಜ್ಞಾನಿಕ ತಳಹದಿಯಲ್ಲಿ ದ್ರಾಕ್ಷಾರಸದ ಉಗಮದ ಸಂಶೋಧನೆಯನ್ನು ನಡೆಸುವ ಪ್ರಯತ್ನದ ಮುಖ್ಯಸ್ಥರಾಗಿದ್ದಾರೆ.
ಅಮೇರಿಕನ್ನರಿಗೆ ನಾಸಾ ಇದೆ, ಐಸ್ಲೆಂಡಿಗೆ ಬೋರ್ಕ್ ಇದೆ. ಆದರೆ ಜಾರ್ಜಿಯಾದಲ್ಲಿ "ಜಾರ್ಜಿಯಾ ದ್ರಾಕ್ಷಿಹಣ್ಣು ಮತ್ತು ದ್ರಾಕ್ಷಾರಸದ ಸಂಸ್ಕೃತಿಯ ಸಂಶೋಧನೆ ಮತ್ತು ಜನಪ್ರಿಯಗೊಳಿಸುವ ಯೋಜನೆ" ಇದೆ. ಜಾರ್ಜಿಯಾದ ಪುರಾತತ್ವಜ್ಞರು ಮತ್ತು ಸಸ್ಯ ಶಾಸ್ತ್ರಜ್ಞರು, ಡೆನ್ಮಾರ್ಕಿನ ತಳಿ ವಿಜ್ಞಾನಿಗಳು ಇಸ್ರೇಲಿನ ಕಾರ್ಬನ್ - 14 ಡೇಟಿಂಗ್ ನ ತಜ್ಞರು ಮತ್ತು ಯುನೈಟೆಡ್ ಸ್ಟೇಟ್ಸ್, ಇಟಲಿ, ಫ್ರಾನ್ಸ್ ಮತ್ತು ಕೆನಡಾದ ಪಂಡಿತರೆಲ್ಲ 2014ರಿಂದ ಒಟ್ಟಿಗೆ ಸೇರಿ ದ್ರಾಕ್ಷಾರಸದೊಂದಿಗಿರುವ ಆದಿಮಾನವನ ಸಂಬಂಧಗಳನ್ನು ಸಂಶೋಧಿಸಿಸುತ್ತಿದ್ದಾರೆ.
"ಜಾರ್ಜಿಯಾದಲ್ಲೇ ದ್ರಾಕ್ಷಾರಸ ತಯಾರಿಕೆಯ ಜನ್ಮವಾದದ್ದು," ಎಂದು ಸಾಬೀತು ಪಡಿಸಲು ನಮಗೇನೂ ಆಸಕ್ತಿ ಇಲ್ಲ ಎಂದು ತಿಬಿಲಿಸಿಯ, ಜಾರ್ಜಿಯಾ ನ್ಯಾಷನಲ್ ಮ್ಯೂಸಿಯಂನ ನಿರ್ದೇಶಕರಾದ ಡೇವಿಡ್ ಲಾರ್ಡ್ಕಿಪನಿಡ್ಜೆ ಹೇಳುತ್ತಾರೆ. "ಅದು ನಮ್ಮ ಗುರಿಯಲ್ಲ. ಅದಕ್ಕಿಂತಲೂ ಉತ್ತಮವಾದ ಪ್ರಶ್ನೆಗಳು ಕೇಳಲಿಕ್ಕಿವೆ. ಯಾಕೆ ಆರಂಭವಾಯಿತು? ಹೇಗೆ ಪುರಾತನ ಕಾಲದಲ್ಲಿ ಎಲ್ಲ ಕಡೆ ಹರಡಿತು? ಇಂದಿನ ದ್ರಾಕ್ಷಿಹಣ್ಣುಗಳನ್ನು ಹೇಗೆ ಹಿಂದಿನ ಕಾಡು ದ್ರಾಕ್ಷಿಹಣ್ಣಿಗೆ, ಸಂಬಂಧ ಕಲ್ಪಿಸುತ್ತೀರ? ಇವುಗಳು ಬಹು ಮುಖ್ಯವಾದ ಪ್ರಶ್ನೆಗಳು."
ಲಾರ್ಡ್ಕಿಪನಿಡ್ಜೆ ಯವರು ಬಹಳ ವಿಶಾಲವಾದ, ಬಹುರಾಷ್ಟ್ರೀಯ, ವೈಜ್ಞಾನಿಕ ತಳಹದಿಯಲ್ಲಿ ದ್ರಾಕ್ಷಾರಸದ ಉಗಮದ ಸಂಶೋಧನೆಯನ್ನು ನಡೆಸುವ ಪ್ರಯತ್ನದ ಮುಖ್ಯಸ್ಥರಾಗಿದ್ದಾರೆ.
ಅಮೇರಿಕನ್ನರಿಗೆ ನಾಸಾ ಇದೆ, ಐಸ್ಲೆಂಡಿಗೆ ಬೋರ್ಕ್ ಇದೆ. ಆದರೆ ಜಾರ್ಜಿಯಾದಲ್ಲಿ "ಜಾರ್ಜಿಯಾ ದ್ರಾಕ್ಷಿಹಣ್ಣು ಮತ್ತು ದ್ರಾಕ್ಷಾರಸದ ಸಂಸ್ಕೃತಿಯ ಸಂಶೋಧನೆ ಮತ್ತು ಜನಪ್ರಿಯಗೊಳಿಸುವ ಯೋಜನೆ" ಇದೆ. ಜಾರ್ಜಿಯಾದ ಪುರಾತತ್ವಜ್ಞರು ಮತ್ತು ಸಸ್ಯ ಶಾಸ್ತ್ರಜ್ಞರು, ಡೆನ್ಮಾರ್ಕಿನ ತಳಿ ವಿಜ್ಞಾನಿಗಳು ಇಸ್ರೇಲಿನ ಕಾರ್ಬನ್ - 14 ಡೇಟಿಂಗ್ ನ ತಜ್ಞರು ಮತ್ತು ಯುನೈಟೆಡ್ ಸ್ಟೇಟ್ಸ್, ಇಟಲಿ, ಫ್ರಾನ್ಸ್ ಮತ್ತು ಕೆನಡಾದ ಪಂಡಿತರೆಲ್ಲ 2014ರಿಂದ ಒಟ್ಟಿಗೆ ಸೇರಿ ದ್ರಾಕ್ಷಾರಸದೊಂದಿಗಿರುವ ಆದಿಮಾನವನ ಸಂಬಂಧಗಳನ್ನು ಸಂಶೋಧಿಸಿಸುತ್ತಿದ್ದಾರೆ.
Paul Salopek
ಫಿಲಿಡೆಲ್ಪಿಯಾದಲ್ಲಿರುವ ಪೆನ್ಸಿಲ್ವೆನೀಯ ವಿಶ್ವವಿದ್ಯಾನಿಲಯದ ಅಣುಜೀವ ಪುರಾತತ್ವ ಸಂಶೋಧನೆ ಮತ್ತು ಈ ಬುದ್ದಿ ಜೀವಿ ತಂಡದ, ಸದಸ್ಯರೂ ಆದ ಪ್ಯಾಟ್ರಿಕ್ ಮ್ಯಾಕ್ಗೂವರ್ನ್ ಹೇಳುವುದು ನಮ್ಮ ಜೀವವರ್ಗದ ಇತಿಹಾಸದಲ್ಲೆ ಅತ್ಯಂತ "ಸ್ವಪ್ರತಿಷ್ಠೆಯ ಪಾನೀಯ" ಎಂದು.
"ಬೇಟೆಗಾರ - ಸಂಗ್ರಹಕಾರರ ಗುಂಪುಗಳು ಮೊಟ್ಟಮೊದಲಬಾರಿ ಭೇಟಿಯಾದ ಘಟನೆಯನ್ನು ಊಹಿಸಿ" ಎಂದು ಮ್ಯಾಕ್ಗೂವರ್ನ್ ಹೇಳುತ್ತಾರೆ. "ದ್ರಾಕ್ಷಾರಸ ಎಲ್ಲರನ್ನು ಒಂದುಗೂಡಿಸಿದೆ. ಇದು ಸಾಮಾಜಿಕವಾಗಿ ಎಲ್ಲರನ್ನು ಹತ್ತಿರಕ್ಕೆ ತಂದಿದೆ. ಮಧ್ಯಸಾರ ಮಾಡುವ ಕೆಲಸವಿದು."
ಎಷ್ಟು ಹಿಂದಿನ ಕಾಲದಿಂದ ಮಾನವ ಜೀವಿ ಮಧ್ಯಸಾರವನ್ನು ಸೇವಿಸುತ್ತಿದ್ದಾನೆಂದರೆ ನಮ್ಮ ಜಠರದಲ್ಲಿರುವ ಶೇಕಡಾ 10ರಷ್ಟು ಕಿಣ್ವಗಳು ಅದನ್ನು ಶಕ್ತಿಯಾಗಿ ಪರಿವರ್ತಿಸುವಂತೆ ವಿಕಸಿಸಿವೆ: ಇದು ಖಂಡಿತವಾಗಿಯೂ ಹಿಂದೆಯಿಂದಲೂ ಕುಡಿಯುತ್ತಿದ್ದೆವೆಂಬುದಕ್ಕೆ ಸಾಕ್ಷಿ. ಉದ್ದೇಶಪೂರ್ವಕವಾಗಿ ಹುಳಿ ಹಿಡಿಸುತ್ತಿದ್ದುದ್ದಕ್ಕೆ ಅತ್ಯಂತ ಹಳೆ ಸಾಕ್ಷಿ ಚೀನಾದ ಉತ್ತರ ಭಾಗದಲ್ಲಿ ಸಿಕ್ಕಿರುವ ಹಳೆಯ ಮಡಿಕೆ ಕುಡಿಕೆಗಳಲ್ಲಿನ ರಾಸಾಯನಿಕ ಪದಾರ್ಥಗಳ ಉಳಿಕೆಗಳು, 9000 ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರು ಅನ್ನ, ಜೇನು ಮತ್ತು ಕಾಡು ಹಣ್ಣಿನ ಬೆರಕೆಯ ರಸವನ್ನು ಗಟಗಟನೆ ಕುಡಿದಿರುವುದಕ್ಕೆ ಸಾಕ್ಷಿ ಹೇಳಿವೆ.
ದ್ರಾಕ್ಷಾರಸ ಆ ನಂತರ ಬಂದಿರುವುದು. ತಮ್ಮ ಆವಿಷ್ಕಾರವೂ ಅಕಸ್ಮಾತ್ತಾಗಿ ಆಗಿದ್ದು ಎಂದು ಮ್ಯಾಕ್ಗೂವರ್ನ್ ಶಂಕಿಸುತ್ತಾರೆ: ಕಾಡು ದ್ರಾಕ್ಷಿಗಳನ್ನು ಪಾತ್ರೆಯ ತಳಭಾಗದಲ್ಲಿ ನಜ್ಜು ಗುಜ್ಜಾಗಿಸಲ್ಪಡುತ್ತದೆ, ಮೇಲೆ ಒಸರಿದ ರಸವು ಕೊಳೆಯಲ್ಪಡುತ್ತದೆ, ಅರ್ಧದಷ್ಟು ಭಾಗ ಗಾಳಿಯಲ್ಲಿರುವ ಯೀಸ್ಟ್ ನಿಂದ ಜೀರ್ಣಿಸಲ್ಪಡುತ್ತದೆ, ಸಾವಿರಾರು ವರ್ಷಗಳಿಂದ ಈ ಹುಳಿಹಿಡಿಸುವಿಕೆಯ ಪ್ರಕ್ರಿಯೆಯ ನಿಗೂಢವಾಗಿಯೇ ಉಳಿದಿದೆ. ಇದು ದ್ರಾಕ್ಷಾರಸಕ್ಕೆ ಬೇರೆ ಪ್ರಪಂಚದ ಶಕ್ತಿಯನ್ನು ಕೊಟ್ಟಿದೆ."ನಿಮ್ಮ ಮನಸ್ಸು ಬದಲಾಯಿಸುವ ಪದಾರ್ಥವೊಂದು ಕಾಣದ ಸ್ಥಳದಿಂದ ಬರುತ್ತದೆ," ಎಂದು ಮ್ಯಾಕ್ಗೂವರ್ನ್ ಹೇಳುತ್ತಾರೆ "ಹಾಗಾಗಿ ಈ ಪಾನೀಯ ನಮ್ಮ ಧರ್ಮದ ಕೇಂದ್ರದಲ್ಲಿ ಗುರುತಿಸಲ್ಪಡಲಾರಂಭಿಸುತ್ತದೆ. ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿ ಬಿಡುತ್ತದೆ, ಕುಟುಂಬಗಳಲ್ಲಿ, ನಂಬಿಕೆಗಳಲ್ಲಿ. ಹಾಗೂ ದ್ರಾಕ್ಷಾರಸವನ್ನು ಸತ್ತವರ ಜೊತೆ ಹೂಳಲಾರಂಭಿಸುತ್ತಾರೆ."
ಮೊದಲಿನಿಂದಲೂ, ದ್ರಾಕ್ಷಾರಸ ಬರಿ ಮತ್ತು ಬರಿಸುವ ವಸ್ತುವಾಗಿಯೇ ಉಳಿದಿಲ್ಲ. ಅದು ಅಮೃತವಾಗಿದೆ. ಹಳೆಯ ಕಾಲದಿಂದಲೂ ದ್ರಾಕ್ಷಾರಸವನ್ನು ಸಂರಕ್ಷಿಸಲು ಬಳಸುವ ವಸ್ತುವಾಗಿ ಉಪಯೋಗಿಸಲ್ಪಟ್ಟು ಅದರಲ್ಲಿರುವ ಮಧ್ಯಸಾರದ ಅಂಶದಲ್ಲಿ ಮತ್ತು ಮರಗಳ ರಾಳಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ, ನೈರ್ಮಲ್ಯದ ಬಗೆಗಿದ್ದ ಅಜ್ಞಾನದ ಆ ಕಾಲದಲ್ಲಿ, ದ್ರಾಕ್ಷಾರಸ ಕುಡಿಯುವುದಾಗಲಿ - ಅಥವಾ ನೀರಿಗೆ - ಅದನ್ನು ಸೇರಿಸುವುದರಿಂದಾಗಲಿ ಖಾಯಿಲೆಗಳು ಕಡಿಮೆಯಾಗಿವೆ. ದ್ರಾಕ್ಷಾರಸ ಜೀವಗಳನ್ನು ರಕ್ಷಿಸಿದೆ.
"ಮೊದಮೊದಲು ದ್ರಾಕ್ಷಾರಸ ತಯಾರಿಸಿದ ಸಂಸ್ಕೃತಿಗಳು ಬಹಳ ಸಂಪದ್ಭರಿತವಾಗಿದ್ದವು," ಎಂದು ಜಾರ್ಜಿಯಾದ ಪುರಾತತ್ವ ಶಾಸ್ತ್ರಜ್ಞ ಮಿಂಡಿಯಾ ಜಲಾಬಾಡ್ಜೆ ಹೇಳುತ್ತಾರೆ. "ಅವರು ಗೋದಿ ಮತ್ತು ಬಾರ್ಲಿ ಬೆಳೆಯುತ್ತಿದ್ದರು. ಅವರ ಹತ್ತಿರ ಕುರಿಗಳು, ಹಂದಿಗಳು ಮತ್ತು ಜಾನುವಾರುಗಳಿದ್ದವು - ಅವರು ಅವುಗಳ ಸಂತಾನಾಭಿವೃದ್ದಿ ಮಾಡುತ್ತಿದ್ದರು. ಜೀವನ ಬಹಳ ಚೆನ್ನಾಗಿತ್ತು. ಅವರು ಬೇಟೆಯಾಡುತ್ತಿದ್ದರು ಮತ್ತೆ ಮೀನುಗಾರಿಕೆ ಸಹ ಮಾಡುತ್ತಿದ್ದರು."
Paul Salopek
ನವಶಿಲಾಯುಗದ ಸಂಸ್ಕೃತಿಯಾದ ಶುಲಾವೇರಿ - ಶೋಮು ಎಂಬ ಬಗ್ಗೆ ಜಲಾಬಾಡ್ಜೆಯವರು ಮಾತನಾಡುತ್ತಿದ್ದರು. ಲೋಹದ ಅವಿಷ್ಕಾರದ ಮೊದಲು, ಮೊದಲ ವ್ಯವಸಾಯದ ಕುರುಹುಗಳು ದೊರೆತ ಸ್ಥಳಗಳು ಕಾಕಸಸ್ ನ ದಕ್ಷಿಣದ ಜಾರ್ಜಿಯಾದಲ್ಲಿ ಪುರಾತತ್ವ ದಿಣ್ಣೆಗಳು ಆದ್ರ್ರತೆಯ ಆವರಣದಲ್ಲಿ ಕಾಣಿಸಿಕೊಂಡಾಗ. ಹಳ್ಳಿಗರು ಕಲ್ಲಿನ ಸಲಕರಣೆಗಳನ್ನು, ಮೂಳೆಯ ಸಾಧನಗಳನ್ನು ಬಳಸುತ್ತಿದ್ದರು. ಶೀತಲ ಪೆಟ್ಟಿಗೆಯ ಗಾತ್ರದ ಬೃಹದಾಕಾರದ ಹೂಜಿಗಳನ್ನು ಕುಶಲತೆಯಿಂದ ತಯಾರಿಸುತ್ತಿದ್ದರು. ಪುರಾಣ ಪ್ರಸಿದ್ಧವಾದ ಕ್ವೆರಿಗಳಿಗಿಂತ ಹಿಂದಿನವುಗಳಾದ ಈ ಹೂಜಿಗಳಲ್ಲಿ ಕಾಳುಗಳು ಮತ್ತು ಜೇನುತುಪ್ಪವನ್ನು ರಕ್ಷಿಸಿಡುತ್ತಿದ್ದರು, ಆದರೆ ದ್ರಾಕ್ಷಾರಸವನ್ನು ಸಹ. ನಮಗೆ ಹೇಗೆ ತಿಳಿಯುವುದು? ಒಂದು ಹೂಜಿಯ ಮೇಲೆ ದ್ರಾಕ್ಷಿಗಳ ಗೊಂಚಲನ್ನು ಚಿತ್ರಿಸಲಾಗಿತ್ತು. ಮ್ಯಾಕ್ಗೂವರ್ನ್ ರವರು ಮಣ್ಣಿನ ಕುಡಿಕೆ ಮಡಿಕೆಗಳ ಮೇಲೆ ನಡೆಸುತ್ತಿದ್ದ ಜೀವರಸಾಯನದ ವಿಶ್ಲೇಷಣೆಯಲ್ಲಿ ಟಾರ್ಟಾರಿಕ್ ಆಮ್ಲದ ಕುರುಹುಗಳು ತೋರಿವೆ. ಇದು ದ್ರಾಕ್ಷಿಯನ್ನು ಭಟ್ಟಿ ಇಳಿಸುತ್ತಿದ್ದುದಕ್ಕೆ ಸಾಕ್ಷಿಯಾಗಿವೆ. ಈ ಕಲಾ ಕೃತಿಗಳು 8000 ವರ್ಷಗಳ ಹಿಂದಿನವು. ಜಾರ್ಜಿಯಾದ ದ್ರಾಕ್ಷಾರಸ ತಯಾರಿಕೆಯ ಸ್ಮಾರಕಗಳು ಅರ್ಮೇನಿಯಾ ಮತ್ತು ಇರಾನ್ ಗಳಲ್ಲಿ ವೈನ್ ತಯಾರಿಕೆಗೆ ಸಂಬಂಧಿಸಿದ ದೊರೆತ ಕುರುಹುಗಳಿಗಿಂತ ಶತಮಾನಗಳಷ್ಟು ಹಳೆಯವು. ಈ ವರ್ಷ ಶುಲಾವೇರಿ - ಶೋಮು ಸ್ಥಳದಲ್ಲಿರುವ ಸಂಶೋಧಕರು ಇತಿಹಾಸ ಪೂರ್ವ ದ್ರಾಕ್ಷಿ ಬೀಜಗಳನ್ನು ಹುಡುಕುತ್ತಿದ್ದಾರೆ.
Paul Salopek
ಒಂದು ದಿನ: ಜಾರ್ಜಿಯಾ ಕೇಂದ್ರ ಭಾಗದ 2200 ವರ್ಷದ ಪುರಾತನ ರೋಮನ್ ಪಟ್ಟಣದ ಪಳೆಯುಳಿಕೆಗಳನ್ನು ವೀಕ್ಷಿಸಿದೆ: ಜಾಲಿಸಾ. ಅರಮನೆಯ ಸುಂದರ ನೆಲಹಾಸನ್ನು ಕೆತ್ತಿ ಕುರೂಪ ಗೋಳಿಸಿದ್ದಾರೆ, ಒಬ್ಬ ಮನುಷ್ಯ ತೂರುವಷ್ಟು ಜೇಡಿ ಮಣ್ಣಿನ ಬಿಲಗಳನ್ನು ಕೊರೆದಿದ್ದಾರೆ. ಅವೆ ಕ್ವೆರಿಗಳು. ಮಧ್ಯಯುಗದ ಜಾರ್ಜಿಯನ್ನರು ಈ ಪುರಾತತ್ವ ಶಾಸ್ತ್ರದ ಅವಶೇಷಗಳನ್ನು ದ್ರಾಕ್ಷಾರಸ ತಯಾರಿಸಲು ಬಳಸಿದ್ದಾರೆ. ತಿಬಿಲಿಸಿಯ ದಕ್ಷಿಣ ಭಾಗದಲ್ಲಿ, ನದಿಯ ಕಡಿದಾದ ಕೊಳ್ಳದ ಮೇಲಿರುವ ಸಮತಟ್ಟಾದ ಕಲ್ಲಿನ ಪ್ರದೇಶದಲ್ಲಿ ಆಫ್ರಿಕಾದ ಹೊರಗೆ ಸಿಕ್ಕಿರುವ ಅತ್ಯಂತ ಪುರಾತನ ಮಾನವ ವಂಶಸ್ಥ (ಹೂಮಿನಿಡ್)ಸಿಕ್ಕಿದ್ದಾನೆ: 1.8 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಕತ್ತೆಕಿರುಬ ಪ್ರಾಣಿಯ ಗುಹೆಗಳಲ್ಲಿ ಹೂಮಿನಿಡ್ ಎರೆಕ್ಟಸ್ ನ ತಲೆ ಬುರುಡೆಗಳ ಉಗ್ರಾಣವಿದೆ. ಒಂಬತ್ತನೆ ಅಥವಾ ಹತ್ತನೆ ಶತಮಾನದಲ್ಲಿ ಈ ಸ್ಥಳದಲ್ಲಿ ಬೃಹದಾಕಾರದ ಕ್ವೆರಿಗಳನ್ನು ಅಗೆದಿದ್ದಾರೆ. ಅಗೆಯುವ ಭರದಲ್ಲಿ ಬೆಲೆಕಟ್ಟಲಾಗದ ಮಾನವ ಪೂರ್ವಜರ ಮೂಳೆಗಳನ್ನು ನಾಶಪಡಿಸಿದ್ದಾರೆ. ಜಾರ್ಜಿಯಾದ ಗತಕಾಲವು ವೈನಿನಿಂದ ತೂತುಬಿದ್ದಿದೆ, ಅದು ಟ್ಯಾನಿನ್ನಲ್ಲಿ ನೆನೆದುಹೋಗಿದೆ.
Paul Salopek
* * *
ಕಳೆದ ಎರಡು ವರ್ಷಗಳಿಂದ, ಆಫ್ರಿಕಾ ಬಿಟ್ಟು ಉತ್ತರಕ್ಕೆ ನಡೆದಿದ್ದೇನೆ. 5000 ವರ್ಷಗಳಿಗಿಂತಲೂ ಹಿಂದೆ, ದ್ರಾಕ್ಷಾರಸ ವಿರುದ್ಧ ದಿಕ್ಕಿನಲ್ಲಿ ನಡೆದಿದೆ, ದಕ್ಷಿಣಕ್ಕೆ ಮತ್ತು ಪಶ್ಚಿಮಕ್ಕೆ, ಕಾಕಸಸ್ ನ ತೊಟ್ಟಿಲನ್ನು ಬಿಟ್ಟು.
"ವಿಶಿಷ್ಟವಾದ ಮಾನವ ವಲಸೆಗಳು ಸಾಮೂಹಿಕ ಹತ್ಯೆಯನ್ನು ಒಳಗೊಂಡಿದೆ," ಎಂದು ಸ್ಟೀಫ಼ನ್ ಬಟಿಕ್ ಎಂಬ ಟೊರೊಂಟೊ ವಿಶ್ವವಿದ್ಯಾನಿಲಯದ ಪುರಾತತ್ವ ಶಾಸ್ತ್ರಜ್ಞ ಹೇಳಿದ್ದಾರೆ. "ನಿಮಗೆ ಗೊತ್ತಲ್ಲ, ಕತ್ತಿಯೊಡನೆ ನಡೆದ ವಲಸೆ, ಜನಸಂಖ್ಯೆಯನ್ನು ಬದಲಿಸಿದೆ. ಆದರೆ ದ್ರಾಕ್ಷಾರಸ ಸಂಸ್ಕೃತಿಯನ್ನು ತಂದ ಜನರೊಡನೆ ಹಾಗಾಗಿಲ್ಲ. ಅಲ್ಲಲ್ಲಿ ಚದುರಿಹೋಗಿ ಸ್ಥಳೀಯ ಸಂಸ್ಕೃತಿಯೊಡನೆ ಬೆರೆತು ಜತೆಜತೆಯಲ್ಲಿ ಬದುಕಿದ್ದಾರೆ. ಅವರು ಸಹಬಾಳ್ವೆಯ ಸಂಬಂಧಗಳನ್ನು ಹುಟ್ಟುಹಾಕಿದ್ದಾರೆ."
ಬಟಿಕ್ ಆ ಕಲಾತ್ಮಕ ಪ್ರಪಂಚದ ಅದ್ಭುತ ಜನಾಂಗದ ಬಗ್ಗೆ ವಿವರಿಸುತ್ತಿದ್ದರು: ಮೊದಲ ಕಾಕೇಶಿಯನ್ ಸಂಸ್ಕೃತಿ (ಇ.ಟಿ.ಸಿ) ಚದುರಿದ ಬಗ್ಗೆ, ಕಾಕಸಸ್ ನಿಂದ ಟರ್ಕಿಯ ಪೂರ್ವಕ್ಕೆ, ಇರಾನ್, ಸಿರಿಯಾ ಮತ್ತು ಮೆಡಿಟರೇನಿಯನ್ ಪೂರ್ವ ದೇಶಗಳ ಪ್ರಪಂಚಕ್ಕೆ 3ನೆ ಮಿಲೇನಿಯಮ್ ಬಿ.ಸಿಯಲ್ಲಿ ಅದೃಶ್ಯರಾದ ಬಗ್ಗೆ.
ಬಟಿಕ್ ವರು ಈ ಒಂದು ಮಾದರಿಯ ಬಗ್ಗೆ ವಿಚಲಿತರಾಗಿದ್ದರು: ವಿಶಿಷ್ಟವಾದ ಎ.ಟಿ.ಸಿ ಕುಂಬಾರಿಕೆಯ ಸಂಸ್ಕೃತಿ ದ್ರಾಕ್ಷಿಗಳು ಬೆಳೆಯುವೆಡೆಯಲ್ಲೆಲ್ಲ ದೊರಕುತ್ತಿದ್ದವು.
"ಈ ವಲಸೆಗಾರರು, ಈ ದ್ರಾಕ್ಷಾರಸ ತಾಂತ್ರಿಕತೆಯನ್ನು ತಾವು ಸಮಾಜಕ್ಕೆ ಕೊಡುವ ಕೊಡುಗೆ ಎಂದೇ ಭಾವಿಸಿದ್ದರು" ಎಂದು ಹೇಳಿದರು. "ಅವರೇನೂ ನಮ್ಮ ಕೆಲಸ ಕಿತ್ತುಕೊಳ್ಳುತ್ತಿರಲಿಲ್ಲ.’ ಅವರು ತಮ್ಮ ಜೊತೆ ಕೊಂಡೊಯ್ಯುತ್ತಿದ್ದ ದ್ರಾಕ್ಷಿ ಬೀಜಗಳು, ದ್ರಾಕ್ಷಿ ಸಸಿಗಳಿಂದ ಹೊಸ ಉದ್ಯೋಗವನ್ನು ಸೃಷ್ಠಿ ಮಾಡುತ್ತಿದ್ದರು- ದ್ರಾಕ್ಷಾ ಬೆಳೆ ಕೃಷಿ, ಅಥವ ಬೇಸಾಯವನ್ನು ಸಂಸ್ಕರಿಸುತ್ತಿದ್ದರು. ಅವರೊಂದು ಸಂಯೋಜಕ ಅಂಗವಾಗಿದ್ದರು. ಅವರು ಒಂದು ರೀತಿಯಲ್ಲಿ ದ್ರಾಕ್ಷಾರಸವನ್ನು ಹೆಚ್ಚು ಜನಪ್ರಿಯಗೊಳಿಸುತ್ತಿದ್ದರು ಅವರು ಎಲ್ಲಿ ಹೋದರಲ್ಲಿ ದ್ರಾಕ್ಷಾರಸ ಪಾನೀಯ ಬಟ್ಟಲುಗಳ ಸಂಖ್ಯಾಸ್ಫೋಟವಾಯಿತು."
ಇ.ಟಿ.ಸಿ ಕುಂಬಾರಿಕೆಯು ಕಾಕಸಸ್ ಬಿಟ್ಟನಂತರವೂ 700ರಿಂದ 1000 ವರ್ಷಗಳವರೆವಿಗೂ ಬಹಳ ವಿಶಿಷ್ಟವಾದ ಪುರಾತತ್ವ ಕುರುಹುಗಳಾಗಿ ಸಹನೀಯವಾಗಿದ್ದವು. ಇದು ಬಟಿಕ್ ರಂತ ಪಂಡಿತರಿಗೂ ಅನುಮಾನ ಹುಟ್ಟಿಸುತ್ತಿದ್ದವು, ಹೆಚ್ಚಿನ ವಲಸೆ ಸಂಸ್ಕೃತಿಗಳು 3 ತಲೆಮಾರಿನ ನಂತರ, ಒಂದಕ್ಕೊಂದು ಮಿಳಿತವಾಗುತ್ತಿದ್ದವು, ಲೀನವಾಗುತ್ತಿದ್ದವು ಮತ್ತು ಅಧೃಶ್ಯವಾಗುತ್ತಿದ್ದವು. ಆದರೆ ಇಲ್ಲಿ ಯಾವ ರಹಸ್ಯವೂ ಇಲ್ಲ.
ಪೈನ್ ಮರಗಳು ಬೆಳೆದಿದ್ದ ತಿಬಿಲಿಸಿಯ ಪರ್ವತಪ್ರದೇಶದಲ್ಲಿ ಬೆಕಾ ಗೊಸಾದ್ಜೆ ಎಂಬ ಮನುಷ್ಯ ಮನೆಯಲ್ಲೆ ಪಕ್ಕದ ಕೊಠಡಿಯೊಂದರಲ್ಲಿ ದ್ರಾಕ್ಷಾರಸವನ್ನು ಭಟ್ಟಿ ಇಳಿಸುತ್ತಿದ್ದ.
Paul Salopek
ಗೊಸಾದ್ಜೆ: ಬೃಹದಾಕಾರ, ವಿನಯಶೀಲ, ಕೆಂಪು ಮುಖದವನು. ತಮ್ಮ ಮನರಂಜನೆಗೋಸ್ಕರ ವಿಟಿಸ್ ವಿನಿಫೆರಾವನ್ನು ಹಿಂಡಿ ಮಾಯಾಜಾಲವನ್ನು ತೆಗೆಯುವ ಹತ್ತಾರು ಸಾವಿರ ಸಾಮಾನ್ಯ ಜಾರ್ಜಿಯನ್ ಕುಟುಂಬಗಳಲ್ಲೊಬ್ಬ. ಆತ ಜೇಡಿಮಣ್ಣಿನ ಕ್ವೆರಿಯನ್ನು ಭೂಮಿಯೊಳಗೆ ಹುದುಗಿಸಿಟ್ಟಿದ್ದಾನೆ: ಅವನ ಮನೆಯ ಕೆಳಗಿರುವ ಬೆಟ್ಟವೇ ಕಾವು ಪೆಟ್ಟಿಗೆ. ಹೂಜಿಗಳ ಸುತ್ತ ಮನೆಯ ನಲ್ಲಿ ನೀರನ್ನು ಬಿಟ್ಟು ಹುಳಿಹಿಡಿಯುವಿಕೆಯನ್ನು ನಿಯಂತ್ರಿಸುತ್ತಾನೆ. ಯಾವ ರಾಸಾಯನಿಕವನ್ನೂ ಉಪಯೋಗಿಸುವುದಿಲ್ಲ, ಏನನ್ನೂ ಸೇರಿಸುವುದಿಲ್ಲ ಆತನ ದ್ರಾಕ್ಷಾರಸ ಜಾರ್ಜಿಯನ್ ದ್ರಾಕ್ಷಾರಸಗಳಂತೆ ಕತ್ತಲೆಯಲ್ಲಿ ಭಟ್ಟಿ ಇಳಿಯುತ್ತವೆ: ದ್ರಾಕ್ಷಿಗಳು ಒಂದಕ್ಕೊಂದು ತಮ್ಮ ಹೊರ ಮೇಲ್ಮೈ ಉಜ್ಜುತ್ತಿದ್ದವು, ಅವುಗಳ ಕಾಂಡಗಳೊಂದಿಗೂ.
ಗೊಸಾದ್ಜೆ ಹೇಳುತ್ತಾನೆ. "ನೀನು ಇದನ್ನ ಭೂಮಿ ಒಳಗಿಟ್ಟು ದೇವರನ್ನು ಕೇಳು: ಈ ತಂಡ ಚೆನ್ನಾಗಿರುತ್ತೆಯೋ?"
ಆತ ಹೇಳುತ್ತಾನೆ: "ಪ್ರತಿಯೊಬ್ಬ ದ್ರಾಕ್ಷಾರಸ ತಯಾರಿಕನೂ ತನ್ನ ಹೃದಯ ಕೊಡುತ್ತಾನೆ, ನನ್ನ ಮಕ್ಕಳು ಸಹಾಯ ಮಾಡುತ್ತಾರೆ. ಅವರೂ ಸಹ ತಮ್ಮ ಹೃದಯವನ್ನು ಕೊಡುತ್ತಾರೆ, ಹುಳಿಹಿಡಿಸುವ ಬ್ಯಾಕ್ಟೀರಿಯಾ? ಅವು ಗಾಳಿಯಲ್ಲಿ ಬರುತ್ತವೆ! ಮೋಡಗಳೂ? ಅವಿಲ್ಲೆ ಇವೆ. ಸೂರ್ಯ ಅಲ್ಲೆ ಇದ್ದಾನೆ. ದ್ರಾಕ್ಷಾರಸದಲ್ಲಿ ಎಲ್ಲವೂ ಇದೆ!"
ಗೊಸಾದ್ಜೆ ಒಂದು ಸಲ ತನ್ನ ಕುಟುಂಬದ ದ್ರಾಕ್ಷಾರಸವನ್ನು ಇಟಲಿಯ ಒಂದು ಸ್ಪರ್ಧೆಗೆ ಕೊಂಡುಹೋಗಿದ್ದ, ತೀರ್ಮಾನಕ್ಕೆ ಬರಬೇಕಾಗಿತ್ತು. "ನ್ಯಾಯಾಧೀಶ ಆಶ್ಚರ್ಯ ಚಕಿತನಾಗಿದ್ದ. ಆತ ಹೇಳಿದ, ’ಇಲ್ಲಿಯವರೆಗೆ ಎಲ್ಲಿ ಕಳೆದುಹೋಗಿದ್ದೆ?’ ನಾ ಹೇಳಿದೆ, ’ಕ್ಷಮಿಸಿ, ನಿನಗೆ ಗೊತ್ತಲ್ಲ, ನಾವು ಸ್ವಲ್ಪ ಕಾರ್ಯನಿರತರಾಗಿದ್ದೆವು, ರಷ್ಯನ್ನರ ಜೊತೆ ಕಾದಾಡುತ್ತಿದ್ದೆವು!"
ಮತ್ತು ಆತನ ಒರಟಾದ ಭೋಜನ ಮೇಜಿನ ಮೇಲೆ ಅಲಂಕಾರಿಕ ಗಾಜಿನ ಕುಂದಗಳಲ್ಲಿ ತಕ್ವೇರಿ ಗುಲಾಬಿಗಳು, ಚಿನೋರಿ ಶ್ವೇತ ಹೂಗಳು, ಸಪರೆವಿಸ್ ಕೆಂಪು ಹೂಗಳ ಕಾಡೇ ಇತ್ತು. ಎಂದೂ ಶಾಶ್ವತವಾದ ಇ.ಟಿ.ಸಿ ಹೆಗ್ಗುರುತು ಅಲ್ಲಿದೆ.
