ಸಂಪಾದಕರ ಟಿಪ್ಪಣಿ : ಟರ್ಕಿಯ ಆಗ್ನೇಯ ದಿಕ್ಕಿನಲ್ಲಿ ಭದ್ರತಾ ವ್ಯವಸ್ಥೆಯಿಂದಾಗಿ ವರದಿಯ ಓಲೆಗಳನ್ನು ಕ್ರಮಾನುಗತಿಯಲ್ಲಿ ಕಳುಹಿಸಲು ತಾತ್ಕಾಲಿಕವಾಗಿ ತಡೆಯುಂಟಾಗಿದೆ. ಇಂದು, ನಾವು ಕತೆಹೇಳುವ ಈ ಪ್ರಕ್ರಿಯೆಯನ್ನು ಕಾಲಾನುಕ್ರಮದಲ್ಲಿ ಮುಂದುವರೆಸುತ್ತಿದ್ದೇವೆ.
ಒಬ್ಬ ಮನುಷ್ಯ ಒಂದು ಗಾಢ ಕೆಂಪು ಬಣ್ಣದ ಮೋಟಾರ್ ಸ್ಕೂಟರ್ ನ್ನು ಓಡಿಸುತ್ತಾ ನಮ್ಮ ಹಿಂದೆ ಬಂದ.
ಆ ಸ್ಕೂಟರ್ನ ಮೇಲೆ ಒಂದು ಸ್ಟಿಕರ್ ಅಂಟಿಸಿತ್ತು: ಅಟಾಟುರ್ಕ್ನ, ಪ್ರಸಿದ್ದ ನೆರಳು ಚಿತ್ರ, ದುಮ್ಲು ಪಿನಾರ್ನ ಯುದ್ಧ ನಡೆದ ಬೆಟ್ಟದ ಮೇಲೆ ನಡೆಯುತ್ತಿರುವ ದೃಶ್ಯ. ಆ ಮನುಷ್ಯ ಶಾಟ್ಗನ್ನನ್ನು ತನ್ನ ಭುಜದ ಮೇಲೆ ನೇತು ಹಾಕಿಕೊಂಡಿದ್ದ. ಅವನ ದೊಡ್ಡ ಹೊಟ್ಟೆಯ ಸುತ್ತಲೂ ಶಾಟ್ಗನ್ನ ಬುಲೆಟ್ಗಳ ಒಂದು ಪಟ್ಟಿ ಸುತ್ತುವರೆದಿತ್ತು. ಆತನ ಹೆಸರು ಸೆಬಿರ್ ಸರ್ಕಾನ್. ನಮಗೆ ನಿಲ್ಲಲು ಸೂಚಿಸಿದ. ನಾವು ನಡೆಯುವುದನ್ನು ಮುಂದುವರೆಸಿದರೆ ಗುಂಡೇಟು ಬೀಳಬಹುದೆಂದು ಹೇಳಿದ.
Paul Salopek
“ರೈತರು ನಿಮ್ಮನ್ನು ಕಳ್ಳರೆಂದು ಭಾವಿಸುತ್ತಾರೆ,” ಸರ್ಕಾನ್ ಹೇಳಿದ.
ಸರ್ಕಾನ್ ಒಬ್ಬ ಪಿಸ್ಟಾಚಿಯೊ ಬೀಜಗಳ ರಕ್ಷಕ. ತನ್ನ ಸೆಲ್ಫೋನ್ ತೆಗೆದ. ಇಬ್ಬರು ಪುರುಷರು ಮತ್ತು ಸರಕು ಸಾಗಿಸುವ ಹೇಸರಗತ್ತೆಯನ್ನು ಮುಂದೆ ಹೋಗಲು ಅವಕಾಶ ನೀಡಿ ಎಂದು ಮುಂದೆ ಇರುವವರಿಗೆ ಸೂಚಿಸಿದ. ಅವರೇನು ಪಿಸ್ಟಾಚಿಯೊ ಮಾಫಿಯಾ ತಂಡದವರಲ್ಲ. (ನಾನು ನನ್ನ ಟರ್ಕಿಷ್ ಪ್ರಯಾಣದ ಜೊತೆಗಾರ, ಡೆನಿಜ಼್ ಕಿಲಿಕ್ ಜೊತೆ ಪೂರ್ವದ ಕಡೆಗೆ ಆಯಾಸದಿಂದ ಕಾಳೆಲೆಯುತ್ತಾ ಸಾಗುತ್ತಿದ್ದೆ.) ಆತ ನಂತರ ನಮಗೆ ಬೆಂಗಾವಲಾಗಿ ಬರುತ್ತೇನೆಂದು ಒತ್ತಾಯಿಸಿದ.
ಪಿಸ್ಟಾಚಿಯೊ ಒಂದು ಸುಂದರವಾದ ಮರ.
ಅದರ ಎಲೆಗಳು ದಟ್ಟ, ಹಸಿರು ಬಣ್ಣದವು, ಅದರ ಕಾಂಡ ಲಾಲಿಪಪ್ನಂತೆ ದುಂಡಗಿದೆ. ಅದರ ತೊಗಟೆ ಮುಟ್ಟಲು ಬಹಳ ಮೃದು. ನೂರಾರು ಚದರ ಮೈಲಿಗಳ ತೋಟದಲ್ಲಿ ಸಮಾನಾಂತರವಾಗಿ ನೆಟ್ಟಿದ್ದಾರೆ, ಅದರ ಬುಡಗಳು ಬಿಳಿಬಣ್ಣದಿಂದ ಬಳಿದಿದ್ದು, ಮಧ್ಯಾನ್ಹದ ಬಿಸಿಲಿಗೆ ಹೊಳೆಯುತ್ತಿತ್ತು. ಮರದ ಸುತ್ತಲಿನ ಕೆಂಬಣ್ಣದ ಅನಾಟೊಲಿಯ ಭೂಮಿ ಅಚ್ಚುಕಟ್ಟಾಗಿ ಉಳಲ್ಪಟ್ಟಿತ್ತು - ಜೆ಼ನ್ ತೋಟದಂತೆ. ಈ ಮೂಲಕ, ಈ ವಿಧೇಯ ಪಿಸ್ಟಾಚಿಯೊ, ಆಗ್ನೇಯ ಟರ್ಕಿಯನ್ನು ಬಹಳ ವಿಶಾಲವಾದ ಮತ್ತು ಅಹ್ಲಾದಕರವಾದ ಭೂಮಿಯನ್ನಾಗಿ ಪರಿವರ್ತಿಸಿದೆ.
Paul Salopek
ಟರ್ಕಿ, ಪ್ರಪಂಚದಲ್ಲೆ ಬಹಳ ಅತ್ಯುತ್ತಮವಾದ ಪಿಸ್ಟಾಚಿಯೊ ಕಾಯಿಗಳನ್ನು ಬೆಳೆಯುವ ಪ್ರದೇಶ. ದೇಶದ ಹೆಮ್ಮೆಯ ವಿಷಯವೂ ಹೌದು. ಟರ್ಕಿಯ ಅನುಮಪವಾದ ಸಿಹಿ ತಿಂಡಿ, ಬಕ್ಲಾವಾ, ಈ ಪಿಸ್ಟಾಚಿಯೊಗಳಿಲ್ಲದೆ ಏನೂ ಅಲ್ಲ. ಪಿಸ್ಟಾಚಿಯೊ ಕಾಯಿಗಳ ಒಂದೊಂದು ತುಂಡುಗಳನ್ನು ಜೇನು ತುಪ್ಪದಲ್ಲಿ ನೆನೆಸಿ, ಪಾಕದಲ್ಲಿ ಕುದಿಸಲ್ಪಡುತ್ತದೆ. ಪಿಸ್ಟಾಚಿಯೊ ಪುಡಿ - ಅದೆಷ್ಟು ದಟ್ಟ ಹಸಿರು ಇರುವುದೆಂದರೆ ಕೃತಕ ಬಣ್ಣ ತುಂಬಿದಂತಿರುತ್ತದೆ (ಆದರೆ, ಕೃತಕವಲ್ಲ) - ಇದು ಈ ಸಿಹಿ ತಿಂಡಿಯ ಮುಖ್ಯ ನೈಸರ್ಗಿಕ ಅಂಶ. ಕಿಲಿಕ್ ಮತ್ತು ನಾನು ಈ ಬಕ್ಲಾವಾ ಪ್ರದೇಶದ ಹೃದಯ ಭಾಗವನ್ನು ದಾಟುತ್ತಿದ್ದೇವೆ. ಫ್ರಾನ್ಸಿನ ಶಾಂಪೇನ್ ಹೇಗೆ ಪ್ರಸಿದ್ದವೊ ಹಾಗೆಯೇ ಟರ್ಕಿಯ ಪೂರ್ವಭಾಗದ ಗಜಿಯನ್ಟೆಪ್ನ ಬೇಯಿಸಿದ ಲಾವೆಂಟೈನ್ ತಿನಿಸು ಪ್ರಸಿದ್ಧ. ಸುಮಾರು ನೂರಕ್ಕೂ ಹೆಚ್ಚು ಸಿಹಿತಿಂಡಿ ತಿನಿಸು ಮಾಡುವ ಸಂಸ್ಥೆಗಳು ಈ ವಿಶ್ವದರ್ಜೆಯ ಪಿಸ್ಟಾಚಿಯೋಗಳನ್ನು ಉಪಯೋಗಿಸಿ ಬಕ್ಲಾವಾವನ್ನು ತಯಾರಿಸುತ್ತಿವೆ.
Paul Salopek
“ಇದು ಹಗುರವಾಗಿರಬೇಕು, ಮತ್ತು ಹೆಚ್ಚು ಸಿಹಿ ಇರಬಾರದು,” ಗಜಿಯನ್ಟೆಪ್ನ ಒಂದು ಬಕ್ಲಾವಾ ಅಂಗಡಿಯಲ್ಲಿ ಕಿಲಿಕ್ ನನಗೆ ಬೋಧಿಸುತ್ತಿದ್ದ. (ನಗರದ ಪ್ರತಿಯೊಂದು ಭಾಗದಲ್ಲಿ ಒಂದು ಬಕ್ಲಾವಾ ಅಂಗಡಿ ಇರಬೇಕೆಂದು ನಗರದ ಕಾನೂನಿನಲ್ಲಿದೆಯೇನೊ ತಿಳಿದಿಲ್ಲ.) ಆತ ಮುಳ್ಳು ಚಮಚವನ್ನು ಉಪಯೋಗಿಸಿ ತನ್ನ ತಟ್ಟೆಯಲ್ಲಿದ್ದ ಸಿಹಿತಿಂಡಿಯನ್ನು ತನಿಖೆ ಮಾಡುತ್ತಿದ್ದ, ತಿಂಡಿಯಲ್ಲಿ ಎಷ್ಟುಪದರಗಳಿವೆಯೆಂದು, ಒಬ್ಬ ಪುರಾತತ್ವ ಶಾಸ್ತ್ರಜ್ಞ ಮೆಸಪೊಟೇಮಿಯ ದಿಬ್ಬದಲ್ಲಿ ನಾಗರೀಕತೆಯ ಪದರಗಳನ್ನು ವಿಶ್ಲೇಷಿಸುವ ರೀತಿಯಲ್ಲಿ. 23 ಪದರಗಳನ್ನು ಲೆಕ್ಕ ಹಾಕಿದ.
ಏಕೆ ಈ ಸಿಹಿಗೋಸ್ಕರ ಸಾಯಬೇಕಾಗಿದೆ?
ಇತ್ತೀಚಿನ ವರ್ಷಗಳಲ್ಲಿ ಈ ಪಿಸ್ಟಾಚಿಯೊ ಇಳುವರಿ ಟರ್ಕಿಯಲ್ಲಿ ಗಗನಕ್ಕೇರಿದೆ. 2010ರಲ್ಲಿ, ಕೆಲವು ಕುತಂತ್ರಿ ವ್ಯಾಪಾರಿಗಳ ಗುಂಪು ಪಿಸ್ಟಾಚಿಯೊ ಬೀಜಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಸಂಗ್ರಿಹಿಸಿಟ್ಟು, ಕಾಳಸಂತೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡಿದರು. ಅದೇ ಸಮಯದಲ್ಲಿ, ಸಿರಿಯಾದ ಅಂತರ್ಯುದ್ಧದ ದೆಸೆಯಿಂದಾಗಿ ಕಡಿಮೆ ಗುಣಮಟ್ಟದ ಕಾಯಿಗಳು, ಕಡಿಮೆ ದರದಲ್ಲಿ ಟರ್ಕಿಯ ಮಾರುಕಟ್ಟೆಯನ್ನು ಪ್ರವೇಶಿತು. ರೈತರ ಲಾಭ ಕುಸಿಯಿತು. ಆದರೆ ಈ ಋತುವಿನಲ್ಲಿ, ಕುತಂತ್ರಿ ಯಾರೆಂದರೆ ಹುಚ್ಚು ಮಳೆ: ಹವಾಮಾನ ಬದಲಾವಣೆ. ಬರಗಾಲ ಬೆಳೆಯನ್ನು ಕುಂಠಿತಗೊಳಿಸಿದೆ. ಒಂದು ಕಾಲದಲ್ಲಿ ಸಿಲ್ಕ್ ರಸ್ತೆಯಲ್ಲಿ ಬಾಯಾಡಿಸುವ ತಿಂಡಿಯಾಗಿದ್ದ ಚಿಕ್ಕ ಕಾಯಿಗಳು, ಈಗ ದುರ್ಲಭವಾಗಿದೆ. ಬಕ್ಲಾವಾ ತಿನಿಸಿನ ತಯಾರಕರ ದುರಾಸೆಯಿಂದ. ಹಾಗಾಗಿ ಹಸಿ ಹಸಿ, ಒಣಗಿಸಿರದ ಪಿಸ್ಟಾಚಿಯೊ ಕಾಯಿಗಳ ಬೆಲೆ ಒಂದು ಪೌಂಡಿಗೆ ದುಪ್ಪಟ್ಟಾಗಿದೆ - $1.45 ನಿಂದ $3.10 ವರೆಗೆ.
Paul Salopek
“ಹಾಗಾಗಿ ಅಲ್ಲಿ ಕಳ್ಳರಿದ್ದಾರೆ,” ಎಂದ ನೆಸಿಪ್ ಕರಬಾಕ್, ಆತ ಪಿಸ್ಟಾಚಿಯೊ ರೈತ. ಈ ದಾರಿಯಲ್ಲಿ ನಮ್ಮನ್ನು ಸ್ವಾಗತಿಸಿದ. “ಅದೊಂದು ಮಾಫಿಯ.”
ಕರಬಾಕ್ನ ಸಂಪೂರ್ಣ ಕುಟುಂಬ ಕಾಯಿಗಳನ್ನು ಸಂಗ್ರಹಿಸುತ್ತಿರುವವರು - ಅಣ್ಣ ತಮ್ಮಂದಿರು, ಹೆಂಡತಿಯರು, ಮಕ್ಕಳು, ಆಡುವ ಮೊಮ್ಮಕ್ಕಳು, ಎಲ್ಲರೂ ಮರಗಳ ಕೊಂಬೆಯೇರಿ, ಗುಲಾಬಿ ಬಣ್ಣದ ಕಾಯಿಗಳನ್ನು ತಿರುವಿ ಕೀಳುತ್ತಿದ್ದಾರೆ, ನೆಲದ ಮೇಲೆ ದಾರಾಳವಾಗಿ ಬಿದ್ದಿರುವ ಕಾಯಿಗಳನ್ನು ಆಯುತ್ತಿದ್ದರು. ಎಲ್ಲ ವಯಸ್ಕರು ಕೈಗೆಟುಕುವಂತೆ ಶಾಟ್ಗನ್ಗಳನ್ನು ಇಟ್ಟುಕೊಂಡಿದ್ದಾರೆ. ಒಂದು ವಾರದ ಮೊದಲು ಈ ಪಿಸ್ಟಾಚಿಯೊ ಮಾಫಿಯ ಒಬ್ಬ ರೈತನನ್ನು ಕೊಂದಿದೆ. ಅಮಾಯಕ ತರುಣ ರೈತ, ಒಸ್ಮಾನ್ ಯಿಲ್ಮಾಜ಼್ . ಮರಗಳ ನಡುವೆ ಕುಳಿತು ತೋಟವನ್ನು ಕಾಯುತ್ತಿದ್ದ. ಮಾಫಿಯಾದವನನ್ನು ಖುದ್ದಾಗಿ ಹಿಡಿದಿದ್ದ. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದ.
ಈ ಅಪರಾಧಿಗಳು ರಾತ್ರಿಯಲ್ಲಿ ಬರುತ್ತಾರೆ, ಕರಬಾಕ್ ವಿವರಿಸುತ್ತಿದ್ದ. ಅವರ ವಾಹನಗಳನ್ನು ರಭಸದಿಂದ ಪಿಸ್ಟಾಚಿಯೋ ತುಂಬಿರುವ ಮರಗಳಿಗೆ ಗುದ್ದುತ್ತಾರೆ. ಒಂದೊಂದು ಮರದಲ್ಲೂ ಸುಮಾರು ನೂರು ಪೌಂಡ್ಗಳಷ್ಟು ಕಾಯಿಗಳಿರುತ್ತವೆ, ಆಗ ಒಂದು ಮರದಿಂದ ಸಿಗುವ ಮಾಲುಗಳ ಬೆಲೆ ಕನಿಷ್ಟವೆಂದರೂ 300$ (ಒಬ್ಬ ರೈತನ ಎರಡು ವಾರದ ಸಂಬಳಕ್ಕಿಂತ ಹೆಚ್ಚು.) ಕದ್ದಂತ ಕಾಯಿಗಳನ್ನು ಯಾವ ಪ್ರಶ್ನೆಗಳನ್ನು ಕೇಳದ ಸಗಟು ವ್ಯಾಪಾರಿಗಳಿಗೆ ಮಾರಲಾಗುತ್ತದೆ: ಇದೆ ಪಿಸ್ಟಾಚಿಯೊ ಕಾಳಸಂತೆ.
“ಪ್ರತಿ ಸಲವೂ, ನಾವುಗಳು ಹೊಡೆತ ತಿನ್ನುತ್ತೇವೆ,” ರೈತ, ಕರಬಾಕ್, ಹೇಳುತ್ತಿದ್ದ. “ಕಾನೂನು ಅಪರಾಧಿಗಳನ್ನು ರಕ್ಷಿಸುವುದರಿಂದ ಕಳ್ಳರನ್ನು ಕೊಲ್ಲಲು ಹಿಂಜರಿಯುತ್ತೇವೆ. ನಮ್ಮನ್ನು ನ್ಯಾಯಾಲಯದಲ್ಲಿ ರಕ್ಷಿಸಿಕೊಳ್ಳಲು ಕೊನೆಗೆ ತೋಟಗಳನ್ನು ಮಾರಬೇಕಾದ ಪರಿಸ್ಥಿತಿ ಉಂಟಾಗುತ್ತದೆ.”
ಆತ ತನ್ನ ಕೆಂಪು ಮೋಟಾರ್ ಸ್ಕೂಟರ್ ಹತ್ತಿ ಗಸ್ತುತಿರುಗಲು ಹೊರಟ, ತೋಟದ ಕಾವಲುಗಾರ, ಸರ್ಕಾನ್, ಪೋಲಿಸರ ಪೀಪಿಯೊಂದನ್ನು ಊದಿ ತೋಟದಲ್ಲಿ ನಮ್ಮ ಇರುವಿಕೆಯನ್ನು ಘೋಷಿಸುತ್ತಾನೆ. ಮರಗಳ ನಡುವೆಯಿಂದ ನಮಗೆ ದಾರಿ ತೋರುತ್ತಾನೆ. ಅಲ್ಲಿಂದ ಸೂರ್ಯ ಬೆಳಗುತ್ತಿದ್ದ ಬಯಲು ಪ್ರದೇಶಕ್ಕೆ ಬಂದೆವು. ಪಿಸ್ಟಾಚಿಯೊ ಗಡಿ ಪ್ರದೇಶ.
“ಹುಡುಗನ ಸಾವಿಗೆ ನನಗೆ ನಿಜವಾಗಲೂ ಮರುಕವಾಗಿದೆ," ಕೈ- ಪಂಪಿನ ಬಾವಿಯಿಂದ ನಮ್ಮ ಪಾತ್ರೆಗಳಿಗೆ ನೀರು ತುಂಬಿಸುತ್ತಿದ್ದ ವಯಸ್ಸಾದ ಪಿಸ್ಟಾಚಿಯೊ ರೈತ ಹೇಳಿದ. " ಅವನು ಕಾರಣವಿಲ್ಲದೆ ಸತ್ತ.”
ಸರ್ಕಾನ್ ತನ್ನ ಶಾಟ್ಗನ್ ಝಳುಪಿಸುತ್ತಾ ಗುರುಗುಟ್ಟಿದ. ಹಳೆ ರೈತ ತಲೆಯಲ್ಲಾಡಿಸಿದ. ಅನಂತ ವಿವೇಚನೆಯುಳ್ಳ, ಮರುಕ ತುಂಬಿದ ಕಣ್ಣುಗಳಿಂದ ಕೂಡಿದ್ದ, ಆತ ಸರ್ಕಾನ್ಗೆ ಹೇಳಿದ: “ನಾಯಕನಾಗಲು ಪ್ರಯತ್ನಿಸಬೇಡ.”
